Skip to main content

ಜರ್ಮನಿ ದೇಶದ ಕವಿ ಉಲ್ರೀಕ ಆಲ್ಮತ ಜ಼ಂಡಿಷ್ (ULRIKE ALMUT SANDIG) ಅವರ ಐದು ಕವನಗಳು FIVE POEMS BY THE GERMAN POET ULRIKE ALMUT SANDIG TRANSLATED INTO KANNADA



ಈ ಹಿಂದಿನ ಪೂರ್ವ-ಜರ್ಮನಿಯಲ್ಲಿ ಜನಿಸಿದ ಉಲ್ರೀಕ ಆಲ್ಮತ ಜ಼ಂಡಿಷ್ (Ulrike Almut Sandig; ಜ: 1979), ಈಗ ಬರ್ಲಿನ್ ನಿವಾಸಿ.  ಕಾವ್ಯರಚನೆಯ ಆರಂಭದ ದಿನಗಳಲ್ಲಿ ಅವರು ತಮ್ಮ ಕವನಗಳನ್ನು ಆಗ ಅವರು ವಾಸಿಸುತ್ತಿದ್ದ ಲೀಪ್‌ಜಿಗ್ ನಗರದ ದಾರದೀಪದ ಕಂಬಗಳಿಗೆ ಅಂಟಿಸುತ್ತಿದ್ದರು, ಸಾರ್ವಜನಿಕ ಸ್ಥಳಗಳಲ್ಲಿ ಹಂಚುತ್ತಿದ್ದರು.  ಕಾವ್ಯವನ್ನು ಅದರ ಸಾಂಪ್ರದಾಯಿಕ ಪರಿಸರಗಳಿಂದ ಮುಕ್ತಗೊಳಿಸಿ ನೇರವಾಗಿ ಓದುಗರಿಗೆ ತಲುಪುವಂತೆ ಮಾಡುವುದು ಅವರ ಉದ್ದೇಶವಾಗಿತ್ತು.  


ಉಲ್ರೀಕರ ಕವನಗಳು ಒಮ್ಮೆಗೆ ಸರಳ ಮತ್ತು ಅದ್ಭುತವಾಗಿದ್ದು, ಎರಡು ಭೂಗೋಳಾರ್ಧಗಳ ಮೂಲಕ ಪ್ರಪಂಚದ ಕೇಂದ್ರಕ್ಕೆ ಸೇರುವ ಪ್ರಯಾಣದ ನಕ್ಷಾರೇಖೆಗಳನ್ನು ಎಳೆಯುತ್ತವೆ.  ಅವರ ಕವನಗಳು ನಗರದ ವಾಸ್ತವತೆಯನ್ನು ಅನ್ವೇಷಿಸುತ್ತವೆ, ಆದರೆ ಆ ವಾಸ್ತವತೆಯು ದುಃಸ್ವಪ್ನಗಳು, ಬೈಬಲ್, ಕಾಲ್ಪನಿಕ ಕಥೆಗಳು ಮತ್ತು ನರ್ಸರಿ ರೈಮ್‌ಗಳ ಉಲ್ಲೇಖಗಳೊಂದಿಗೆ ಹೆಣೆದುಕೊಂಡಿದೆ.  ಕಣ್ಮರೆಯಾಗುತ್ತಿರುವ ಪ್ರಪಂಚಕ್ಕಾಗಿ ಹಂಬಲಿಸುತ್ತದೆ.  


ಹಾಸ್ಯ, ವ್ಯಂಗ್ಯ, ಸಂದೇಹ, ಮತ್ತು ನಾಸ್ಟಾಲ್ಜಿಯಾದಿಂದ ಕೂಡಿದ ಈ ಕವನಗಳು ಸಂಗೀತಕವೂ ಆಗಿವೆ, ಬಹು ಅರ್ಥಗಳನ್ನು ಬಳಸಿಕೊಳ್ಳುತ್ತವೆ ಮತ್ತು ವಾಕ್ಯರಚನೆಯನ್ನು ವಿಸ್ತರಿಸುತ್ತವೆ, ಆದ್ದರಿಂದ ಓದುಗರು ನಿರಂತರವಾಗಿ ಊಹೆ ಮಾಡುತ್ತಲೇ ಇರುತ್ತಾರೆ, ಮುಂಬರುವ ಸಾಲು ಪಡೆವ ತಿರುವನ್ನು ನೋಡಿ ಆಶ್ಚರ್ಯಪಡುತ್ತಾರೆ (‘ಥಿಕ್ ಆಫ಼್ ಇಟ್’ ಸಂಕಲನದ ಬೆನ್ನುಡಿಯಿಂದ ಆಯ್ದಕೊಂಡ ಸಾಲುಗಳು).  


ಉಲ್ರೀಕರು ಸಾಮಾನ್ಯವಾಗಿ ಅವರ ಕವನಗಳಿಗೆ ಶಿರ್ಷಿಕೆ ಕೊಡುವುದಿಲ್ಲ, ಆದರೆ ಕವನದ ಒಂದು ಸಾಲು ಅಥವಾ ವಾಕ್ಯಾಂಶವನ್ನು ದಪ್ಪಕ್ಷರದಲ್ಲಿ ತೊರಿಸುತ್ತಾರೆ. ಇದನ್ನು ಕವನದ ಕೇಂದ್ರವೆಂದು ಅಂದುಕೊಳ್ಳಬಹುದಾದರೂ, ಅವರು ಅದಕ್ಕೆ ಶಿರ್ಷಿಕೆಯ ಪಟ್ಟ ಕೊಡುವುದಿಲ್ಲ.  ಇಲ್ಲಿ ನಾನು ಅನುವಾದಿಸಿದ ಕವನಗಳಲ್ಲಿಯೂ ಇದನ್ನೇ ಅನುಸರಿಸಿರುವೆ.    ಪೂರ್ವ-ಜರ್ಮನಿಯಲ್ಲಿ ಬೆಳೆದ ಉಲ್ರೀಕರಿಗೆ ವರ್ಗಶ್ರೇಣಿಗಳ ಮೇಲಿರುವ ಅಪನಂಬಿಕೆ ಹಾಗೂ ಅವರ ಭಾಷೆಯ ಪಾರದರ್ಶಿಕತೆಯನ್ನು ಇದು ಎತ್ತಿ ತೋರಿಸುತ್ತದೆ ಎಂದು ಕ್ಯಾರೆನ ಲೀಡರ್ ಹೇಳುತ್ತಾರೆ.          


ನಾಲ್ಕು ಕವನ ಸಂಕಲನಗಳಲ್ಲದೇ, ಉಲ್ರೀಕ ಆಲ್ಮತ ಜ಼ಂಡಿಷ್-ರು ಎರಡು ಕಥಾ ಸಂಕಲನಗಳು ಹಾಗೂ ಒಂದು ಕಾದಂಬರಿಯನ್ನು ಕೂಡ ಪ್ರಕಟಿಸಿದ್ದಾರೆ.  ತಮ್ಮ ಬರಹಗಳಿಗಾಗಿ ಅವರಿಗೆ ಜರ್ಮನಿಯ ಹಲವಾರು ಪ್ರತಿಷ್ಠಿತ ಪುರಸ್ಕಾರಗಳು ದೊರಕಿವೆ. ಖ್ಯಾತ ಸಂಗೀತ ಸಂಯೋಜಕರು ಹಾಗೂ ‘ಪರ್ಫಾರ್ಮೆನ್ಸ ಆರ್ಟಿಸ್ಟ್’ರ ಜತೆಗೂಡಿ ಇವರು ತಮ್ಮದೇ ಕವನಗಳ  ಕಾವ್ಯಾಭಿನಯ ಪ್ರದರ್ಶನಗಳನ್ನು ನೀಡಿದ್ದಾರೆ.  ಈ ಪ್ರದರ್ಶನಗಳ ವೀಡಿಯೋಗಳನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.  ಉಲ್ರೀಕ ಆಲ್ಮತ ಜ಼ಂಡಿಷ್ರು ಜರ್ಮನ್ ಸಾಹಿತ್ಯದ ಹೊಸ ತಲೆಮಾರಿನ ಮುಖ್ಯ ಕವಿಗಳಲ್ಲಿ ಒಬ್ಬರು ಹಾಗೂ ನಿಜವಾದ ಅರ್ಥದಲ್ಲಿ ಒಬ್ಬ ‘ಕಾವ್ಯಕಲಾವಿದೆ.’  

ಇಲ್ಲಿರುವ ಕವನಗಳನ್ನು ಕಲ್ಕತ್ತಾದ ‘ಸೀಗಲ್ ಬುಕ್ಸ’ ಪ್ರಕಟಿಸಿದ ಉಲ್ರೀಕರ ಇಂಗ್ಲಿಷ್ ಅನುವಾದಿತ ಎರಡು ಕವನ ಸಂಕಲನಗಳಿಂದ ಆಯ್ದುಕೊಂಡಿದ್ದೇನೆ – ‘ಥಿಕ್ ಆಫ಼್ ಇಟ್, 2018’ (Thick of It) ಮತ್ತು ‘ಐ ಆ್ಯಾಮ್ ಅ ಫೀಲ್ಡ್ ಫುಲ್ ಆಫ಼್ ರೇಪ್ಸೀಡ್… 2020’ (I am a Field Full of Rapeseed, Give Cover to Deer and Shine Like Thirteen Oil Paintings Laid One on Top of the Other).  ಈ ಸಂಕಲನಗಳಲ್ಲಿವ ಕವನಗಳನ್ನು ಜರ್ಮನ್ ಭಾಷೆಯಿಂದ ಇಂಗ್ಲಿಷ್ ಗೆ ಅನುವಾದ ಮಾಡಿದವರು ಕ್ಯಾರೆನ ಲೀಡರ್ (Karen Leeder).  


LINK TO MY KANNADA TRANSLATIONS OF ULRIKE ALMUT SANDIG'S POEMS PUBLISHED IN AVADHI MAG:


Comments

Popular posts from this blog

ಐದು ಸಮಕಾಲೀನ ಗ್ರೀಕ್ ಕವನಗಳು - FIVE CONTEMPORARY GREEK POEMS - TRANSLATED INTO KANNADA

ಇಲ್ಲಿರುವ ಐದು ಕವನಗಳನ್ನು ೨೦೧೬ ರಲ್ಲಿ ಪ್ರಕಟವಾದ ಆಸ್ಟ್‌ರಿಟಿ ಮೆಶರ್ಸ್ (Austerity Measures; Ed. Karen Van Dyck; Penguin Random House UK; 2016) ಎಂಬ ಗ್ರೀಕ್ ಭಾಷೆಯಿಂದ ಇಂಗ್ಲೀಷಿಗೆ ಅನುವಾದಗೊಂಡ ಕವನಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಯೂರೊಪಿಯನ್ ಯೂನಿಯನ್‌ನಿಂದ ತೆಗೆದುಕೊಂಡ ಸಾಲಗಳನ್ನು ಪೂರೈಸಲಾಗದೇ, ಗ್ರೀಸ್ ಸಾಲದ ಕೂಪಕ್ಕೆ ಬಿತ್ತು. ದಿವಾಳಿಯಾಗುತ್ತಿರುವ ದೇಶವನ್ನು ಪಾರು ಮಾಡಲು ಯೂರೊಪಿಯನ್ ಯೂನಿಯನ್ ಮತ್ತೆ ದೊಡ್ಡ ಮೊತ್ತದ ಸಾಲ ನೀಡಲು ಒಪ್ಪಿತ್ತು. ಆದರೆ, ಈ ಸಾಲದ ಪ್ರತಿಯಾಗಿ ಗ್ರೀಸ್ ಸರ್ಕಾರವು ದೇಶದೊಳಗೆ ‘ಕಠಿಣ ಆರ್ಥಿಕ ಕ್ರಮಗಳನ್ನ’ ತೆಗೆದುಕೊಳ್ಳಬೇಕೆಂದು ಯೂರೊಪಿಯನ್ ಯೂನಿಯನ್ ನಿರ್ದೇಶಿಸಿತು.  ಗ್ರೀಸ್ ಸರ್ಕಾರವು ತನ್ನ ಜನಹಿತ ಪುರೊಭಿವೃದ್ಧಿ ಖರ್ಚುಗಳನ್ನು ಕಡಿಮೆ ಮಾಡಿತ್ತು. ಪೆನ್ಶನ್ ಮೊಟಕುಗೊಳಿಸಲಾಯಿತು, ತೆರಿಗೆ ಹೆಚ್ಚಿಸಲಾಯಿತು, ನಿರುದ್ಯೋಗ ಹೆಚ್ಚಿತು, ವಿದ್ಯುತ್ ಹಾಗೂ ನೀರಿನ ಅಭಾವ, ಯುವಜನರು ಹೊಟ್ಟೆಪಾಡಿಗಾಗಿ ದೇಶ ಬಿಟ್ಟು ಹೋದರು, ಬಡತನ ಹೆಚ್ಚುತ್ತಾ ಹೊಯಿತು – ಹೀಗೆ ಕಳೆದ ೧೦-೧೫ ವರ್ಷದಿಂದ ಗ್ರೀಸ್‌ ದೇಶದ ಕುಸಿದ ಆರ್ಥಿಕ ಸ್ಥಿತಿಯಿಂದ ಉಂಟಾದ ಸಾಮಾಜಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳ ಸಂಧಿಗ್ಧತೆಯ ಮಧ್ಯೆ ಕಾವ್ಯಸ್ಪಂದನವಾಗಿ ಹುಟ್ಟಿದ ಕವನಗಳಿವು. ಪುರಾತನ ಗ್ರೀಕ್ ಕಾವ್ಯ, ಗ್ರೀಕ್ ಪುರಾಣ, ಆಧುನಿಕ ಕಾವ್ಯ, ಇವೆಲ್ಲರ ಅಡಿಪಾಯದ ಮೇಲೆ ವೇಗವಾಗಿ ಬದಲಾಗುತ್ತಿರುವ ಗ್ರೀಸ್ ದೇಶ...

ತಾದೆಉಷ್ ರೂಜ಼ಾವೀಚ್-ರ ಐದು ಕವನಗಳು - FIVE POEMS BY THE POLISH POET TADEUSZ ROZEWICZ TRANSLATED INTO KANNADA

ಪೋಲೆಂಡ್ ದೇಶಕ್ಕೆ  1918 ರಲ್ಲಿ    ಸ್ವಾತಂತ್ರ್ಯ ದೊರಕಿದ ನಂತರ ಹುಟ್ಟಿದ ಮೊದಲ ತಲೆಮಾರಿನ ಪ್ರಮುಖ ಬರಹಗಾರರಲ್ಲಿ ಒಬ್ಬರು ತಾದೆ ಉಷ್ ರೂಜ಼ಾವೀಚ್.   1921 ರಲ್ಲಿ ಜನಿಸಿದ  ರೂಜ಼ಾವೀಚ್ ರು, ಎರಡನೆಯ ವಿಶ್ವಯುದ್ಧದ ಕಾರಣದಿಂದಾಗಿ ತಮ್ಮ ವಿಧ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು.  ಚಿಕ್ಕ ವಯಸ್ಸಿನಲ್ಲೇ ತಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಅವರು ಬಡಗಿ, ಉಗ್ರಾಣನೌಕರ, ಹೀಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು.  ಇದೇ ಯುದ್ಧದ ಸಮಯದಲ್ಲಿ ಅವರು ಭೂಗತ ಸೈನ್ಯಶಾಲೆಯಲ್ಲಿ ತರಭೇತಿ ಪಡೆದು ಪೋಲಂಡಿನ ಭೂಗತ “ಹೋಮ್ ಆರ್ಮಿ” ಯಲ್ಲಿ ಸುಮಾರು  1943 ರಿಂದ  1944 ವರೆಗೂ ಜರ್ಮನಿಯ ಸೈನ್ಯದ ವಿರುದ್ಧ ಹೋರಾಡಿದರು.     ಈ  ಸಮಯದಲ್ಲಿ ಅವರು ಕವನಗಳನ್ನು ಬರೆಯತೊಡಗಿದರು ಹಾಗೂ ಒಂದು ಪತ್ರಿಕೆಯನ್ನೂ ಸಂಪಾದಿಸಿದರು.  ‘ಗ್ರೂಪಾ ಕ್ರಾಕೊವ್ಸ್‌ಕಾ’ ಅಂಬ ಹೆಸರಿನ ಸಾಹಿತ್ಯ ಸಮೂಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.   ಆ ವ್ಶವಿಟ್ಜ಼-ನ ( Auschwitz ) ದುರಂತದ ನಂತರ ಜೀವನಕ್ಕೆ ಅರ್ಥವನ್ನು ಮರುಹುಟ್ಟಿಸುವ ದೆಸೆಯಲ್ಲಿ ಕಾವ್ಯಕ್ಕೆ ಒಂದು ಹೊಸ  ಆ ಕಾರ ಕೊಟ್ಟರು ಇವರು.  ಅವರ ನಿರಾಕರಣವಾದ ಮತ್ತು ಅಭಿವ್ಯಕ್ತಿಶೀಲ ಹಾಗೂ ದುರಂತ ಕಾವ್ಯದ ಶೈಲಿಗಾಗಿ ಅವರು ಪಾಶ್ಚಾತ್ಯ ಕಾವ್ಯಪ್...

ಆಡಮ್ ಜಾಗಯೆವ್‌ಸ್ಕಿ-ಯವರ ಐದು ಕವನಗಳು - FIVE POEMS BY THE POLISH POET ADAM ZAGAJEWSKI TRANSLATED INTO KANNADA

ಸಮಕಾಲೀನ ಪೋಲಿಷ್ ಕಾವ್ಯಲೋಕದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು ಆಡಮ್ ಜಾಗಯೆವ್‌ಸ್ಕಿ. ಜಾಗಯೆವ್‌ಸ್ಕಿಯವರು ಪೋಲಿಷ್ ಸಾಹಿತ್ಯದ ‘ಹೊಸ ಅಲೆ’ಯ (ನೊವಾ ಫ಼ಲಾ) ಅಥವಾ ‘ಜೆನರೇಷನ್ ಆಫ಼ ‘68’ ರ ಪ್ರಧಾನ ಕವಿಯಾಗಿದ್ದರು. ಕವಿಯಲ್ಲದೇ, ಜಾಗಯೆವ್‌ಸ್ಕಿಯವರು ಕಾದಂಬರಿಕಾರ, ಪ್ರಬಂಧಕಾರ, ಹಾಗೂ ಅನುವಾದಕರೂ ಆಗಿದ್ದರು.   ಜಾಗಯೆವ್‌ಸ್ಕಿಯವರ ಸುಮಾರು 13 ಕವನ ಸಂಕಲನಗಳು ಪ್ರಕಟವಾಗಿವೆ ಹಾಗೂ ಅವರ ಕವನಗಳು ಬೇರೆ ಬೇರೆ ಭಾಷೆಗೆ ಅನುವಾದವಾಗಿವೆ. ಅವರ ಸಾಹಿತ್ಯಕ್ಕೆ ಹಲವಾರು ಅಂತರ್ರಾಷ್ಟ್ರೀಯ ಪ್ರಶಸ್ತಿಗಳು, ಮನ್ನಣೆಗಳು ಸಂದಿವೆ. ಜಾಗಯೆವ್‌ಸ್ಕಿಯವರ ಕವನಗಳಲ್ಲಿ ರಾತ್ರಿ, ಕನಸುಗಳು, ಇತಿಹಾಸ ಮತ್ತು ಸಮಯ, ಅನಂತತೆ ಮತ್ತು ನಿತ್ಯತೆ, ನಿಶ್ಶಬ್ಧ, ಮರಣ, ಇವು ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಸ್ತುಗಳು.   ಕಳೆದ ತಿಂಗಳು, ಅಂದರೆ 21 ಮಾರ್ಚ 2021 ರಂದು ಜಾಗಯೆವ್‌ಸ್ಕಿಯವರು ನಿಧನರಾದರು. ಕಾಕತಾಳಿಯವೆಂಬಂತೆ, 21 ಮಾರ್ಚ ವಿಶ್ವ ಕಾವ್ಯ ದಿನ. ಇಲ್ಲಿರುವ ಅವರ ಐದು ಕವನಗಳ ಕನ್ನಡಾನುವಾದ ಅವರ ನೆನಪಿಗೆ, ಕಾವ್ಯ ಪ್ರತಿಭೆಗೆ ಒಂದು ಸಣ್ಣ ಗೌರವ. ಈ ಕವನಗಳನ್ನು ಕ್ಲೇರ್ ಕಾವಾನರವರು (Clare Cavanagh) ಪೋಲಿಷ್-ನಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ನಾನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವೆ.   LINK TO THE KANNADA TRANSLATIONS IN AVADHI MAG: https://avadhim...