ಆಡಮ್ ಜಾಗಯೆವ್‌ಸ್ಕಿ-ಯವರ ಐದು ಕವನಗಳು - FIVE POEMS BY THE POLISH POET ADAM ZAGAJEWSKI TRANSLATED INTO KANNADA
ಸಮಕಾಲೀನ ಪೋಲಿಷ್ ಕಾವ್ಯಲೋಕದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು ಆಡಮ್ ಜಾಗಯೆವ್‌ಸ್ಕಿ. ಜಾಗಯೆವ್‌ಸ್ಕಿಯವರು ಪೋಲಿಷ್ ಸಾಹಿತ್ಯದ ‘ಹೊಸ ಅಲೆ’ಯ (ನೊವಾ ಫ಼ಲಾ) ಅಥವಾ ‘ಜೆನರೇಷನ್ ಆಫ಼ ‘68’ ರ ಪ್ರಧಾನ ಕವಿಯಾಗಿದ್ದರು. ಕವಿಯಲ್ಲದೇ, ಜಾಗಯೆವ್‌ಸ್ಕಿಯವರು ಕಾದಂಬರಿಕಾರ, ಪ್ರಬಂಧಕಾರ, ಹಾಗೂ ಅನುವಾದಕರೂ ಆಗಿದ್ದರು.
ಜಾಗಯೆವ್‌ಸ್ಕಿಯವರ ಸುಮಾರು 13 ಕವನ ಸಂಕಲನಗಳು ಪ್ರಕಟವಾಗಿವೆ ಹಾಗೂ ಅವರ ಕವನಗಳು ಬೇರೆ ಬೇರೆ ಭಾಷೆಗೆ ಅನುವಾದವಾಗಿವೆ. ಅವರ ಸಾಹಿತ್ಯಕ್ಕೆ ಹಲವಾರು ಅಂತರ್ರಾಷ್ಟ್ರೀಯ ಪ್ರಶಸ್ತಿಗಳು, ಮನ್ನಣೆಗಳು ಸಂದಿವೆ. ಜಾಗಯೆವ್‌ಸ್ಕಿಯವರ ಕವನಗಳಲ್ಲಿ ರಾತ್ರಿ, ಕನಸುಗಳು, ಇತಿಹಾಸ ಮತ್ತು ಸಮಯ, ಅನಂತತೆ ಮತ್ತು ನಿತ್ಯತೆ, ನಿಶ್ಶಬ್ಧ, ಮರಣ, ಇವು ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಸ್ತುಗಳು.
ಕಳೆದ ತಿಂಗಳು, ಅಂದರೆ 21 ಮಾರ್ಚ 2021 ರಂದು ಜಾಗಯೆವ್‌ಸ್ಕಿಯವರು ನಿಧನರಾದರು. ಕಾಕತಾಳಿಯವೆಂಬಂತೆ, 21 ಮಾರ್ಚ ವಿಶ್ವ ಕಾವ್ಯ ದಿನ. ಇಲ್ಲಿರುವ ಅವರ ಐದು ಕವನಗಳ ಕನ್ನಡಾನುವಾದ ಅವರ ನೆನಪಿಗೆ, ಕಾವ್ಯ ಪ್ರತಿಭೆಗೆ ಒಂದು ಸಣ್ಣ ಗೌರವ.
ಈ ಕವನಗಳನ್ನು ಕ್ಲೇರ್ ಕಾವಾನರವರು (Clare Cavanagh) ಪೋಲಿಷ್-ನಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ನಾನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವೆ.
LINK TO THE KANNADA TRANSLATIONS IN AVADHI MAG:

Comments
Post a Comment