ತಾದೆಉಷ್ ರೂಜ಼ಾವೀಚ್-ರ ಐದು ಕವನಗಳು - FIVE POEMS BY THE POLISH POET TADEUSZ ROZEWICZ TRANSLATED INTO KANNADA
ಪೋಲೆಂಡ್ ದೇಶಕ್ಕೆ 1918ರಲ್ಲಿ ಸ್ವಾತಂತ್ರ್ಯ ದೊರಕಿದ ನಂತರ ಹುಟ್ಟಿದ ಮೊದಲ ತಲೆಮಾರಿನ ಪ್ರಮುಖ ಬರಹಗಾರರಲ್ಲಿ ಒಬ್ಬರು ತಾದೆಉಷ್ ರೂಜ಼ಾವೀಚ್. 1921ರಲ್ಲಿ ಜನಿಸಿದ ರೂಜ಼ಾವೀಚ್ರು, ಎರಡನೆಯ ವಿಶ್ವಯುದ್ಧದ ಕಾರಣದಿಂದಾಗಿ ತಮ್ಮ ವಿಧ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಚಿಕ್ಕ ವಯಸ್ಸಿನಲ್ಲೇ ತಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಅವರು ಬಡಗಿ, ಉಗ್ರಾಣನೌಕರ, ಹೀಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಇದೇ ಯುದ್ಧದ ಸಮಯದಲ್ಲಿ ಅವರು ಭೂಗತ ಸೈನ್ಯಶಾಲೆಯಲ್ಲಿ ತರಭೇತಿ ಪಡೆದು ಪೋಲಂಡಿನ ಭೂಗತ “ಹೋಮ್ ಆರ್ಮಿ” ಯಲ್ಲಿ ಸುಮಾರು 1943ರಿಂದ 1944ವರೆಗೂ ಜರ್ಮನಿಯ ಸೈನ್ಯದ ವಿರುದ್ಧ ಹೋರಾಡಿದರು.
ಈ ಸಮಯದಲ್ಲಿ ಅವರು ಕವನಗಳನ್ನು ಬರೆಯತೊಡಗಿದರು ಹಾಗೂ ಒಂದು ಪತ್ರಿಕೆಯನ್ನೂ ಸಂಪಾದಿಸಿದರು. ‘ಗ್ರೂಪಾ ಕ್ರಾಕೊವ್ಸ್‌ಕಾ’ ಅಂಬ ಹೆಸರಿನ ಸಾಹಿತ್ಯ ಸಮೂಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಆವ್ಶವಿಟ್ಜ಼-ನ (Auschwitz) ದುರಂತದ ನಂತರ ಜೀವನಕ್ಕೆ ಅರ್ಥವನ್ನು ಮರುಹುಟ್ಟಿಸುವ ದೆಸೆಯಲ್ಲಿ ಕಾವ್ಯಕ್ಕೆ ಒಂದು ಹೊಸ ಆಕಾರ ಕೊಟ್ಟರು ಇವರು. ಅವರ ನಿರಾಕರಣವಾದ ಮತ್ತು ಅಭಿವ್ಯಕ್ತಿಶೀಲ ಹಾಗೂ ದುರಂತ ಕಾವ್ಯದ ಶೈಲಿಗಾಗಿ ಅವರು ಪಾಶ್ಚಾತ್ಯ ಕಾವ್ಯಪ್ರಭಾವಕ್ಕೆ (ಮುಖ್ಯವಾಗಿ ಎಲಿಯಟ್, ಪೌಂಡ್, ಹಾಗೂ ರಸೆಲ್) ಒಳಗಾದರು ಎಂದು ರೂಜ಼ಾವೀಚ್ರ ಕಾವ್ಯದ ಬಗ್ಗೆ ಆಲೋಚನೆಯೂ ಇದೆ; ಅದರೂ ಅವರ ‘Anxiety’ (1947) ಹಾಗೂ ‘The Red Glove’ (1948) ಕವನ ಸಂಕಲನಗಳನ್ನು ಕ್ರಾಂತಿಕಾರಿ ಸಂಕಲನಗಳೆಂದು ಗುರುತಿಸಲಾಗಿದೆ.
ಪೋಲೆಂಡಿನ ಹಾಗೂ ಅಂತರ್ರಾಷ್ಟ್ರೀಯ ನವ್ಯ ಸಾಹಿತ್ಯ (Avant Garde) ಪ್ರಯೋಗಗಳನ್ನು ಮುಂದುವರಿಸಿಕೊಂಡು ಹೋದ ಲೇಖಕರಲ್ಲಿ ಬಹುಮುಖ ಪ್ರತಿಭೆ ಹಾಗೂ ಸೃಜನಶೀಲತೆಗಾಗಿ ಹೆಸರು ಪಡೆದವರಲ್ಲಿ ರೂಜ಼ಾವೀಚ್ ಪ್ರಮುಖರು. ಸುಮಾರು 15 ಕವನ ಸಂಕಲನಗಳನ್ನು ಪ್ರಕಟಿಸಿದ ರೂಜ಼ಾವೀಚ್ ಅವರು ಉತ್ತಮ ನಾಟಕಕಾರರೂ ಆಗಿದ್ದು 12 ನಾಟಕಗಳನ್ನು ಹಾಗೂ ಹಲವಾರು ಚಿತ್ರಕಥೆಗಳನ್ನೂ ಬರೆದಿದ್ದಾರೆ. ಹಂಗೇರಿಯನ್ ಭಾಷೆಯ ಕವನಗಳನ್ನು ಪೋಲಿಷ್ ಭಾಷೆಗೆ ಅನುವಾದವೂ ಮಾಡಿದ್ದಾರೆ.
LINK TO MY KANNADA TRANSLATIONS OF TADEUSZ ROZEWICZ'S POEMS PUBLISHED IN AVADHI MAG:
https://avadhimag.in/ಮತ್ತೆ-ಐದು-ಪೋಲಿಷ್-ಕವನಗಳು/

Comments
Post a Comment