ತಾದೆಉಷ್ ರೂಜ಼ಾವೀಚ್-ರ ಐದು ಕವನಗಳು - FIVE POEMS BY THE POLISH POET TADEUSZ ROZEWICZ TRANSLATED INTO KANNADA
ಪೋಲೆಂಡ್ ದೇಶಕ್ಕೆ 1918 ರಲ್ಲಿ ಸ್ವಾತಂತ್ರ್ಯ ದೊರಕಿದ ನಂತರ ಹುಟ್ಟಿದ ಮೊದಲ ತಲೆಮಾರಿನ ಪ್ರಮುಖ ಬರಹಗಾರರಲ್ಲಿ ಒಬ್ಬರು ತಾದೆ ಉಷ್ ರೂಜ಼ಾವೀಚ್. 1921 ರಲ್ಲಿ ಜನಿಸಿದ ರೂಜ಼ಾವೀಚ್ ರು, ಎರಡನೆಯ ವಿಶ್ವಯುದ್ಧದ ಕಾರಣದಿಂದಾಗಿ ತಮ್ಮ ವಿಧ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಚಿಕ್ಕ ವಯಸ್ಸಿನಲ್ಲೇ ತಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಅವರು ಬಡಗಿ, ಉಗ್ರಾಣನೌಕರ, ಹೀಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಇದೇ ಯುದ್ಧದ ಸಮಯದಲ್ಲಿ ಅವರು ಭೂಗತ ಸೈನ್ಯಶಾಲೆಯಲ್ಲಿ ತರಭೇತಿ ಪಡೆದು ಪೋಲಂಡಿನ ಭೂಗತ “ಹೋಮ್ ಆರ್ಮಿ” ಯಲ್ಲಿ ಸುಮಾರು 1943 ರಿಂದ 1944 ವರೆಗೂ ಜರ್ಮನಿಯ ಸೈನ್ಯದ ವಿರುದ್ಧ ಹೋರಾಡಿದರು. ಈ ಸಮಯದಲ್ಲಿ ಅವರು ಕವನಗಳನ್ನು ಬರೆಯತೊಡಗಿದರು ಹಾಗೂ ಒಂದು ಪತ್ರಿಕೆಯನ್ನೂ ಸಂಪಾದಿಸಿದರು. ‘ಗ್ರೂಪಾ ಕ್ರಾಕೊವ್ಸ್‌ಕಾ’ ಅಂಬ ಹೆಸರಿನ ಸಾಹಿತ್ಯ ಸಮೂಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಆ ವ್ಶವಿಟ್ಜ಼-ನ ( Auschwitz ) ದುರಂತದ ನಂತರ ಜೀವನಕ್ಕೆ ಅರ್ಥವನ್ನು ಮರುಹುಟ್ಟಿಸುವ ದೆಸೆಯಲ್ಲಿ ಕಾವ್ಯಕ್ಕೆ ಒಂದು ಹೊಸ ಆ ಕಾರ ಕೊಟ್ಟರು ಇವರು. ಅವರ ನಿರಾಕರಣವಾದ ಮತ್ತು ಅಭಿವ್ಯಕ್ತಿಶೀಲ ಹಾಗೂ ದುರಂತ ಕಾವ್ಯದ ಶೈಲಿಗಾಗಿ ಅವರು ಪಾಶ್ಚಾತ್ಯ ಕಾವ್ಯಪ್...