ಜರ್ಮನಿ ದೇಶದ ಕವಿ ಉಲ್ರೀಕ ಆಲ್ಮತ ಜ಼ಂಡಿಷ್ (ULRIKE ALMUT SANDIG) ಅವರ ಐದು ಕವನಗಳು FIVE POEMS BY THE GERMAN POET ULRIKE ALMUT SANDIG TRANSLATED INTO KANNADA
ಈ ಹಿಂದಿನ ಪೂರ್ವ-ಜರ್ಮನಿಯಲ್ಲಿ ಜನಿಸಿದ ಉಲ್ರೀಕ ಆಲ್ಮತ ಜ಼ಂಡಿಷ್ (Ulrike Almut Sandig; ಜ: 1979), ಈಗ ಬರ್ಲಿನ್ ನಿವಾಸಿ. ಕಾವ್ಯರಚನೆಯ ಆರಂಭದ ದಿನಗಳಲ್ಲಿ ಅವರು ತಮ್ಮ ಕವನಗಳನ್ನು ಆಗ ಅವರು ವಾಸಿಸುತ್ತಿದ್ದ ಲೀಪ್‌ಜಿಗ್ ನಗರದ ದಾರದೀಪದ ಕಂಬಗಳಿಗೆ ಅಂಟಿಸುತ್ತಿದ್ದರು, ಸಾರ್ವಜನಿಕ ಸ್ಥಳಗಳಲ್ಲಿ ಹಂಚುತ್ತಿದ್ದರು. ಕಾವ್ಯವನ್ನು ಅದರ ಸಾಂಪ್ರದಾಯಿಕ ಪರಿಸರಗಳಿಂದ ಮುಕ್ತಗೊಳಿಸಿ ನೇರವಾಗಿ ಓದುಗರಿಗೆ ತಲುಪುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಉಲ್ರೀಕರ ಕವನಗಳು ಒಮ್ಮೆಗೆ ಸರಳ ಮತ್ತು ಅದ್ಭುತವಾಗಿದ್ದು, ಎರಡು ಭೂಗೋಳಾರ್ಧಗಳ ಮೂಲಕ ಪ್ರಪಂಚದ ಕೇಂದ್ರಕ್ಕೆ ಸೇರುವ ಪ್ರಯಾಣದ ನಕ್ಷಾರೇಖೆಗಳನ್ನು ಎಳೆಯುತ್ತವೆ. ಅವರ ಕವನಗಳು ನಗರದ ವಾಸ್ತವತೆಯನ್ನು ಅನ್ವೇಷಿಸುತ್ತವೆ, ಆದರೆ ಆ ವಾಸ್ತವತೆಯು ದುಃಸ್ವಪ್ನಗಳು, ಬೈಬಲ್, ಕಾಲ್ಪನಿಕ ಕಥೆಗಳು ಮತ್ತು ನರ್ಸರಿ ರೈಮ್‌ಗಳ ಉಲ್ಲೇಖಗಳೊಂದಿಗೆ ಹೆಣೆದುಕೊಂಡಿದೆ. ಕಣ್ಮರೆಯಾಗುತ್ತಿರುವ ಪ್ರಪಂಚಕ್ಕಾಗಿ ಹಂಬಲಿಸುತ್ತದೆ. ಹಾಸ್ಯ, ವ್ಯಂಗ್ಯ, ಸಂದೇಹ, ಮತ್ತು ನಾಸ್ಟಾಲ್ಜಿಯಾದಿಂದ ಕೂಡಿದ ಈ ಕವನಗಳು ಸಂಗೀತಕವೂ ಆಗಿವೆ, ಬಹು ಅರ್ಥಗಳನ್ನು ಬಳಸಿಕೊಳ್ಳುತ್ತವೆ ಮತ್ತು ವಾಕ್ಯರಚನೆಯನ್ನು ವಿಸ್ತರಿಸುತ್ತವೆ, ಆದ್ದರಿಂದ ಓದುಗರು ನಿರಂತರವಾಗಿ ಊಹೆ ಮಾಡುತ್ತಲೇ ಇರುತ್ತಾರೆ, ಮುಂಬರುವ ಸಾಲು ಪಡೆವ ತಿರುವನ್ನು ನೋಡಿ ಆಶ್ಚರ್ಯಪಡುತ್ತಾರೆ (‘ ಥಿಕ್ ಆಫ಼...