Skip to main content

Posts

ಜರ್ಮನಿ ದೇಶದ ಕವಿ ಉಲ್ರೀಕ ಆಲ್ಮತ ಜ಼ಂಡಿಷ್ (ULRIKE ALMUT SANDIG) ಅವರ ಐದು ಕವನಗಳು FIVE POEMS BY THE GERMAN POET ULRIKE ALMUT SANDIG TRANSLATED INTO KANNADA

ಈ ಹಿಂದಿನ ಪೂರ್ವ-ಜರ್ಮನಿಯಲ್ಲಿ ಜನಿಸಿದ ಉಲ್ರೀಕ ಆಲ್ಮತ ಜ಼ಂಡಿಷ್ (Ulrike Almut Sandig; ಜ: 1979), ಈಗ ಬರ್ಲಿನ್ ನಿವಾಸಿ.  ಕಾವ್ಯರಚನೆಯ ಆರಂಭದ ದಿನಗಳಲ್ಲಿ ಅವರು ತಮ್ಮ ಕವನಗಳನ್ನು ಆಗ ಅವರು ವಾಸಿಸುತ್ತಿದ್ದ ಲೀಪ್‌ಜಿಗ್ ನಗರದ ದಾರದೀಪದ ಕಂಬಗಳಿಗೆ ಅಂಟಿಸುತ್ತಿದ್ದರು, ಸಾರ್ವಜನಿಕ ಸ್ಥಳಗಳಲ್ಲಿ ಹಂಚುತ್ತಿದ್ದರು.  ಕಾವ್ಯವನ್ನು ಅದರ ಸಾಂಪ್ರದಾಯಿಕ ಪರಿಸರಗಳಿಂದ ಮುಕ್ತಗೊಳಿಸಿ ನೇರವಾಗಿ ಓದುಗರಿಗೆ ತಲುಪುವಂತೆ ಮಾಡುವುದು ಅವರ ಉದ್ದೇಶವಾಗಿತ್ತು.   ಉಲ್ರೀಕರ ಕವನಗಳು ಒಮ್ಮೆಗೆ ಸರಳ ಮತ್ತು ಅದ್ಭುತವಾಗಿದ್ದು, ಎರಡು ಭೂಗೋಳಾರ್ಧಗಳ ಮೂಲಕ ಪ್ರಪಂಚದ ಕೇಂದ್ರಕ್ಕೆ ಸೇರುವ ಪ್ರಯಾಣದ ನಕ್ಷಾರೇಖೆಗಳನ್ನು ಎಳೆಯುತ್ತವೆ.  ಅವರ ಕವನಗಳು ನಗರದ ವಾಸ್ತವತೆಯನ್ನು ಅನ್ವೇಷಿಸುತ್ತವೆ, ಆದರೆ ಆ ವಾಸ್ತವತೆಯು ದುಃಸ್ವಪ್ನಗಳು, ಬೈಬಲ್, ಕಾಲ್ಪನಿಕ ಕಥೆಗಳು ಮತ್ತು ನರ್ಸರಿ ರೈಮ್‌ಗಳ ಉಲ್ಲೇಖಗಳೊಂದಿಗೆ ಹೆಣೆದುಕೊಂಡಿದೆ.  ಕಣ್ಮರೆಯಾಗುತ್ತಿರುವ ಪ್ರಪಂಚಕ್ಕಾಗಿ ಹಂಬಲಿಸುತ್ತದೆ.   ಹಾಸ್ಯ, ವ್ಯಂಗ್ಯ, ಸಂದೇಹ, ಮತ್ತು ನಾಸ್ಟಾಲ್ಜಿಯಾದಿಂದ ಕೂಡಿದ ಈ ಕವನಗಳು ಸಂಗೀತಕವೂ ಆಗಿವೆ, ಬಹು ಅರ್ಥಗಳನ್ನು ಬಳಸಿಕೊಳ್ಳುತ್ತವೆ ಮತ್ತು ವಾಕ್ಯರಚನೆಯನ್ನು ವಿಸ್ತರಿಸುತ್ತವೆ, ಆದ್ದರಿಂದ ಓದುಗರು ನಿರಂತರವಾಗಿ ಊಹೆ ಮಾಡುತ್ತಲೇ ಇರುತ್ತಾರೆ, ಮುಂಬರುವ ಸಾಲು ಪಡೆವ ತಿರುವನ್ನು ನೋಡಿ ಆಶ್ಚರ್ಯಪಡುತ್ತಾರೆ (‘ ಥಿಕ್ ಆಫ಼...
Recent posts

ಎಸ್ಟೋನಿಯಾ ದೇಶದ ಕವಿ ಡೊರಿಸ್ ಕರೆವಾ–ರವರ ಆರು ಕವನಗಳು SIX POEMS BY THE ESTONIAN POET DORIS KAREVA TRANSLATED INTO KANNADA

19 MAY 2023 ʻಎಸ್ಟೋನಿಯನ್ ಮಹಿಳಾ ಕಾವ್ಯದ ಸಶಕ್ತ ಸಂಪ್ರದಾಯದಲ್ಲಿ ಡೊರಿಸ್ ಕರೆವಾ ಅವರು ಹೊಳೆಯುವ ಮುತ್ತಿನಂತೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆʼ ಎಂದು ಡೊರಿಸ್ ಕರೆವಾ ಅವರ ಬಗ್ಗೆ ಹೇಳುವುದು ಸುಲಭ. ಹೀಗೆ ಹೇಳಿದರೆ, ಡೊರಿಸ್ ಕರೆವಾ ಅವು ಒಬ್ಬ ಉತ್ತಮ ಕವಿ ಎಂದು ಸಾಧಾರಣವಾಗಿ ಹೇಳಿದಂತಾಗುತ್ತದೆ. ಡೊರಿಸ್ ಕರೆವಾ ಅವರು ಪದಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ತಿಳಿದಿರುವ ಪ್ರವೀಣೆ ಹಾಗೂ ಎಸ್ಟೋನಿಯಾದ ಪ್ರೀತಿಯ ಕವಯತ್ರಿಯರಲ್ಲಿ ಒಬ್ಬರು, ಎಂದು ಹೇಳಿದರೆ ಅದು ಸತ್ಯಕ್ಕೆ ಹತ್ತಿರವಾದ ಮಾತು. ಡೊರಿಸ್ ಕರೆವಾ ಅವರು 1958ರಲ್ಲಿ ಜನಿಸಿದರು. 1983ರಲ್ಲಿ ಅವರು ಟಾರ್ಟು ವಿಶ್ವವಿದ್ಯಾಲಯದಿಂದ ರೋಮನ್ – ಜರ್ಮಾನಿಕ್ ಭಾಷಾಶಾಸ್ತ್ರದಲ್ಲಿ ಪದವಿ ಪಡೆದರು. 1978-1993 ಮತ್ತು 1997-2002ರವರೆಗೆ ಅವರು ಸಾಂಸ್ಕೃತಿಕ ಸಾಪ್ತಾಹಿಕ ‘ಸಿರ್ಪ್‌’ ಗಾಗಿ (Sirp) ಕೆಲಸ ಮಾಡಿದರು. ಸಾಹಿತ್ಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಅವರು ಹದಿನಾರು ವರ್ಷಗಳ ಕಾಲ (1992-2008) UNESCOಗಾಗಿ ಎಸ್ಟೋನಿಯನ್ ರಾಷ್ಟ್ರೀಯ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕರೆವಾ ಅವರ ಕಾವ್ಯದ ಗಮನಾರ್ಹ ಲಕ್ಷಣವೆಂದರೆ ರೂಪಕ್ಕೆ ಕಟ್ಟುನಿಟ್ಟಾದ ಅನುಸರಣೆ. ಆದಷ್ಟು ಕಡಿಮೆ ಪದಗಳನ್ನು ಬಳಸುವುದು ಕರೆವಾ ಅವರ ವಿಧಾನವಾಗಿದೆ. ಹೀಗಿದ್ದೂ, ಆಶ್ಚರ್ಯವೆಂಬಂತೆ ಅವರು ಹೇಳಬಯಸುವ ಸಂದೇಶ ಸ್ಪಷ್ಟವಾಗಿ ಹಾಗೂ ಬಹುಅರ್ಥಗಳೊಂದಿಗೆ ಮೂಡಿಬರುತ್ತದೆ. ಇನ್ನೊಂದು ದೃಷ್ಟಿಯಿಂದ ...

ಬಲ್ಗೇರಿಯಾ ದೇಶದ ಕವಿ ಕ್ರಿಸ್ಟಿನ್ ಡಿಮಿಟ್ರೋವಾ-ರವರ ಏಳು ಕವನಗಳು SEVEN POEMS BY THE BULGARIAN POET KRISTIN DIMITROVA TRANSLATED INTO KANNADA

29 JUNE 2023 ಕ್ರಿಸ್ಟಿನ್ ಡಿಮಿಟ್ರೋವಾ ಅವರು ಒಂದು ವಿಶಿಷ್ಟ ಶೈಲಿ ಮತ್ತು ಸಾಹಿತ್ಯಿಕ ವ್ಯಕ್ತಿತ್ವವನ್ನು ಬೆಳೆಸಿಕೊಂಡ ನಿಪುಣ ಕವಿ. ದೈನಂದಿನ ಜೀವನದ ಪರಿಚಿತ ಪರಿಸರದಲ್ಲಿ ಹೊಸ ಮತ್ತು ಅನಿರೀಕ್ಷಿತ ದೃಷ್ಟಿಕೋನಗಳನ್ನು ಅನ್ವೇಷಿಸುವುದು ಅವರ ಕಾವ್ಯ ಬರವಣಿಗೆಯ ಮೊದಲ ಹಂತ. ಈ ಪರಿಸರದಲ್ಲೇ ಅವರು ವಾಸ್ತವವನ್ನು ಹೊಸತಾಗಿ ನೊಡುತ್ತಾರೆ. ಡಿಮಿಟ್ರೋವಾ ಅವರ ಆರಂಭಿಕ ಕಾವ್ಯವು ರಸ್ತೆಯಿಂದ ತನ್ನ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆಯುತ್ತದೆ. ಕಮ್ಯುನಿಸಂನಿಂದ ಪ್ರಜಾಪ್ರಭುತ್ವದ ಸಮಾಜದತ್ತ ಸಾಗುವ ರಾಜಕೀಯ ರೂಪಾಂತರದ ಪಯಣದಲ್ಲಿ ಭರವಸೆ, ಉತ್ಸಾಹ ಮತ್ತು ಪ್ರತಿಭಟನೆಗಳ ಮುಖ್ಯ ವೇದಿಕೆಯಾಗಿತ್ತು ಈ ರಸ್ತೆ.  ಬಲ್ಗೇರಿಯನ್ ಕಾವ್ಯದ ಹೊಸ ಅಲೆಯನ್ನು ಬದಲಾಗುತ್ತಿರುವ ವಾಸ್ತವತೆಯು ಹಿಂದಿನ ಸಾಹಿತ್ಯದಲ್ಲಿದ್ದ ಕ್ಲೀಷೆಗಳು, ವಾಕ್ಚಾತುರ್ಯ ಮತ್ತು ಮರುಕಧ್ವನಿಗಳನ್ನು ತ್ಯಜಿಸಲು ಪ್ರಚೋದಿಸುತ್ತದೆ; ಹಾಗೆಯೇ ನಿಜವಾದ ಮೌಲ್ಯಗಳಿಗಾಗಿ ನಿರಂತರ ಅನ್ವೇಷಣೆಯ ಆರಂಭಿಕ ಹಂತವಾಗಿ ನಮ್ಮ ಸುತ್ತಲಿನ ವಸ್ತುಗಳ ಮೂಲಭೂತ ಕ್ರಮಗಳು ಮತ್ತು ಸ್ವರೂಪಗಳಿಗೆ ಮರಳಲು ಸಹ ಪ್ರಚೋದಿಸುತ್ತದೆ. ಇದು ಸಾಂಪ್ರದಾಯಿಕ ವಾಸ್ತವಿಕತೆಯೆಡೆಗೆ ಯಾವುದೇ ರೀತಿಯಲ್ಲಿ ಮತ್ತೆ ಹಿಂತಿರುಗುವ ಪಯಣವಲ್ಲ, ಇದು ಕಾವ್ಯಾತ್ಮಕ ಸ್ಫೂರ್ತಿ ಮತ್ತು ಅದೇ ಸಮಯದಲ್ಲಿ ಸಾಂಪ್ರದಾಯಿಕ ರೂಪಗಳು ಮತ್ತು ಭಾಷೆಯ ಡಿರೊಮ್ಯಾಂಟಿಸೈಸೇಶನ್ ಎರಡಕ್ಕೂ ಮೂಲವಾಗಿದೆ. ಪದರುಗಳ ಕಲಾತ್ಮಕ ಮಿಶ್ರಣ, ಲಘುಗೀತೆಯ...

ತಾದೆಉಷ್ ರೂಜ಼ಾವೀಚ್-ರ ಐದು ಕವನಗಳು - FIVE POEMS BY THE POLISH POET TADEUSZ ROZEWICZ TRANSLATED INTO KANNADA

ಪೋಲೆಂಡ್ ದೇಶಕ್ಕೆ  1918 ರಲ್ಲಿ    ಸ್ವಾತಂತ್ರ್ಯ ದೊರಕಿದ ನಂತರ ಹುಟ್ಟಿದ ಮೊದಲ ತಲೆಮಾರಿನ ಪ್ರಮುಖ ಬರಹಗಾರರಲ್ಲಿ ಒಬ್ಬರು ತಾದೆ ಉಷ್ ರೂಜ಼ಾವೀಚ್.   1921 ರಲ್ಲಿ ಜನಿಸಿದ  ರೂಜ಼ಾವೀಚ್ ರು, ಎರಡನೆಯ ವಿಶ್ವಯುದ್ಧದ ಕಾರಣದಿಂದಾಗಿ ತಮ್ಮ ವಿಧ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು.  ಚಿಕ್ಕ ವಯಸ್ಸಿನಲ್ಲೇ ತಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಅವರು ಬಡಗಿ, ಉಗ್ರಾಣನೌಕರ, ಹೀಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು.  ಇದೇ ಯುದ್ಧದ ಸಮಯದಲ್ಲಿ ಅವರು ಭೂಗತ ಸೈನ್ಯಶಾಲೆಯಲ್ಲಿ ತರಭೇತಿ ಪಡೆದು ಪೋಲಂಡಿನ ಭೂಗತ “ಹೋಮ್ ಆರ್ಮಿ” ಯಲ್ಲಿ ಸುಮಾರು  1943 ರಿಂದ  1944 ವರೆಗೂ ಜರ್ಮನಿಯ ಸೈನ್ಯದ ವಿರುದ್ಧ ಹೋರಾಡಿದರು.     ಈ  ಸಮಯದಲ್ಲಿ ಅವರು ಕವನಗಳನ್ನು ಬರೆಯತೊಡಗಿದರು ಹಾಗೂ ಒಂದು ಪತ್ರಿಕೆಯನ್ನೂ ಸಂಪಾದಿಸಿದರು.  ‘ಗ್ರೂಪಾ ಕ್ರಾಕೊವ್ಸ್‌ಕಾ’ ಅಂಬ ಹೆಸರಿನ ಸಾಹಿತ್ಯ ಸಮೂಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.   ಆ ವ್ಶವಿಟ್ಜ಼-ನ ( Auschwitz ) ದುರಂತದ ನಂತರ ಜೀವನಕ್ಕೆ ಅರ್ಥವನ್ನು ಮರುಹುಟ್ಟಿಸುವ ದೆಸೆಯಲ್ಲಿ ಕಾವ್ಯಕ್ಕೆ ಒಂದು ಹೊಸ  ಆ ಕಾರ ಕೊಟ್ಟರು ಇವರು.  ಅವರ ನಿರಾಕರಣವಾದ ಮತ್ತು ಅಭಿವ್ಯಕ್ತಿಶೀಲ ಹಾಗೂ ದುರಂತ ಕಾವ್ಯದ ಶೈಲಿಗಾಗಿ ಅವರು ಪಾಶ್ಚಾತ್ಯ ಕಾವ್ಯಪ್...

ಆಡಮ್ ಜಾಗಯೆವ್‌ಸ್ಕಿ-ಯವರ ಐದು ಕವನಗಳು - FIVE POEMS BY THE POLISH POET ADAM ZAGAJEWSKI TRANSLATED INTO KANNADA

ಸಮಕಾಲೀನ ಪೋಲಿಷ್ ಕಾವ್ಯಲೋಕದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು ಆಡಮ್ ಜಾಗಯೆವ್‌ಸ್ಕಿ. ಜಾಗಯೆವ್‌ಸ್ಕಿಯವರು ಪೋಲಿಷ್ ಸಾಹಿತ್ಯದ ‘ಹೊಸ ಅಲೆ’ಯ (ನೊವಾ ಫ಼ಲಾ) ಅಥವಾ ‘ಜೆನರೇಷನ್ ಆಫ಼ ‘68’ ರ ಪ್ರಧಾನ ಕವಿಯಾಗಿದ್ದರು. ಕವಿಯಲ್ಲದೇ, ಜಾಗಯೆವ್‌ಸ್ಕಿಯವರು ಕಾದಂಬರಿಕಾರ, ಪ್ರಬಂಧಕಾರ, ಹಾಗೂ ಅನುವಾದಕರೂ ಆಗಿದ್ದರು.   ಜಾಗಯೆವ್‌ಸ್ಕಿಯವರ ಸುಮಾರು 13 ಕವನ ಸಂಕಲನಗಳು ಪ್ರಕಟವಾಗಿವೆ ಹಾಗೂ ಅವರ ಕವನಗಳು ಬೇರೆ ಬೇರೆ ಭಾಷೆಗೆ ಅನುವಾದವಾಗಿವೆ. ಅವರ ಸಾಹಿತ್ಯಕ್ಕೆ ಹಲವಾರು ಅಂತರ್ರಾಷ್ಟ್ರೀಯ ಪ್ರಶಸ್ತಿಗಳು, ಮನ್ನಣೆಗಳು ಸಂದಿವೆ. ಜಾಗಯೆವ್‌ಸ್ಕಿಯವರ ಕವನಗಳಲ್ಲಿ ರಾತ್ರಿ, ಕನಸುಗಳು, ಇತಿಹಾಸ ಮತ್ತು ಸಮಯ, ಅನಂತತೆ ಮತ್ತು ನಿತ್ಯತೆ, ನಿಶ್ಶಬ್ಧ, ಮರಣ, ಇವು ಮತ್ತೆ ಮತ್ತೆ ಕಾಣಿಸಿಕೊಳ್ಳುವ ವಸ್ತುಗಳು.   ಕಳೆದ ತಿಂಗಳು, ಅಂದರೆ 21 ಮಾರ್ಚ 2021 ರಂದು ಜಾಗಯೆವ್‌ಸ್ಕಿಯವರು ನಿಧನರಾದರು. ಕಾಕತಾಳಿಯವೆಂಬಂತೆ, 21 ಮಾರ್ಚ ವಿಶ್ವ ಕಾವ್ಯ ದಿನ. ಇಲ್ಲಿರುವ ಅವರ ಐದು ಕವನಗಳ ಕನ್ನಡಾನುವಾದ ಅವರ ನೆನಪಿಗೆ, ಕಾವ್ಯ ಪ್ರತಿಭೆಗೆ ಒಂದು ಸಣ್ಣ ಗೌರವ. ಈ ಕವನಗಳನ್ನು ಕ್ಲೇರ್ ಕಾವಾನರವರು (Clare Cavanagh) ಪೋಲಿಷ್-ನಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ನಾನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವೆ.   LINK TO THE KANNADA TRANSLATIONS IN AVADHI MAG: https://avadhim...

ಐದು ಸಮಕಾಲೀನ ಗ್ರೀಕ್ ಕವನಗಳು - FIVE CONTEMPORARY GREEK POEMS - TRANSLATED INTO KANNADA

ಇಲ್ಲಿರುವ ಐದು ಕವನಗಳನ್ನು ೨೦೧೬ ರಲ್ಲಿ ಪ್ರಕಟವಾದ ಆಸ್ಟ್‌ರಿಟಿ ಮೆಶರ್ಸ್ (Austerity Measures; Ed. Karen Van Dyck; Penguin Random House UK; 2016) ಎಂಬ ಗ್ರೀಕ್ ಭಾಷೆಯಿಂದ ಇಂಗ್ಲೀಷಿಗೆ ಅನುವಾದಗೊಂಡ ಕವನಗಳ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಯೂರೊಪಿಯನ್ ಯೂನಿಯನ್‌ನಿಂದ ತೆಗೆದುಕೊಂಡ ಸಾಲಗಳನ್ನು ಪೂರೈಸಲಾಗದೇ, ಗ್ರೀಸ್ ಸಾಲದ ಕೂಪಕ್ಕೆ ಬಿತ್ತು. ದಿವಾಳಿಯಾಗುತ್ತಿರುವ ದೇಶವನ್ನು ಪಾರು ಮಾಡಲು ಯೂರೊಪಿಯನ್ ಯೂನಿಯನ್ ಮತ್ತೆ ದೊಡ್ಡ ಮೊತ್ತದ ಸಾಲ ನೀಡಲು ಒಪ್ಪಿತ್ತು. ಆದರೆ, ಈ ಸಾಲದ ಪ್ರತಿಯಾಗಿ ಗ್ರೀಸ್ ಸರ್ಕಾರವು ದೇಶದೊಳಗೆ ‘ಕಠಿಣ ಆರ್ಥಿಕ ಕ್ರಮಗಳನ್ನ’ ತೆಗೆದುಕೊಳ್ಳಬೇಕೆಂದು ಯೂರೊಪಿಯನ್ ಯೂನಿಯನ್ ನಿರ್ದೇಶಿಸಿತು.  ಗ್ರೀಸ್ ಸರ್ಕಾರವು ತನ್ನ ಜನಹಿತ ಪುರೊಭಿವೃದ್ಧಿ ಖರ್ಚುಗಳನ್ನು ಕಡಿಮೆ ಮಾಡಿತ್ತು. ಪೆನ್ಶನ್ ಮೊಟಕುಗೊಳಿಸಲಾಯಿತು, ತೆರಿಗೆ ಹೆಚ್ಚಿಸಲಾಯಿತು, ನಿರುದ್ಯೋಗ ಹೆಚ್ಚಿತು, ವಿದ್ಯುತ್ ಹಾಗೂ ನೀರಿನ ಅಭಾವ, ಯುವಜನರು ಹೊಟ್ಟೆಪಾಡಿಗಾಗಿ ದೇಶ ಬಿಟ್ಟು ಹೋದರು, ಬಡತನ ಹೆಚ್ಚುತ್ತಾ ಹೊಯಿತು – ಹೀಗೆ ಕಳೆದ ೧೦-೧೫ ವರ್ಷದಿಂದ ಗ್ರೀಸ್‌ ದೇಶದ ಕುಸಿದ ಆರ್ಥಿಕ ಸ್ಥಿತಿಯಿಂದ ಉಂಟಾದ ಸಾಮಾಜಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳ ಸಂಧಿಗ್ಧತೆಯ ಮಧ್ಯೆ ಕಾವ್ಯಸ್ಪಂದನವಾಗಿ ಹುಟ್ಟಿದ ಕವನಗಳಿವು. ಪುರಾತನ ಗ್ರೀಕ್ ಕಾವ್ಯ, ಗ್ರೀಕ್ ಪುರಾಣ, ಆಧುನಿಕ ಕಾವ್ಯ, ಇವೆಲ್ಲರ ಅಡಿಪಾಯದ ಮೇಲೆ ವೇಗವಾಗಿ ಬದಲಾಗುತ್ತಿರುವ ಗ್ರೀಸ್ ದೇಶ...